ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎರಡು ಕೈಗಳ ಕಥೆ

ನನ್ನ ಇಂದಿನ ದಿನವೇ ಚೆನ್ನಾಗಿಲ್ಲ. ಆಫೀಸ್ ನಲ್ಲಿ ಬಾಸ್, ಕೆಲಸ ತಡವಾದದಕ್ಕೆ ಯಗ್ಗಾಮುಗ್ಗಾ ಬೈದಿದ್ದರು. ಇಂದು ಆಫೀಸಿನಿಂದ ಹೊರಡುವುದು ತಡವಾಗಿ ಮನೆಗೆ ಬಂದವನೇ ಹಾಸಿಗೆಯ ಮೇಲೆ ಕುಸಿದು ಬಿದ್ದೆ. ದೇಹಕ್ಕೂ ಅರಾಮೆನಿಸಲಿಲ್ಲ, ಮನಸ್ಸಿಗೂ ಅರಾಮೆನಿಸಲಿಲ್ಲ. ಕಿಚನ್ನಿಗೆ ಹೋಗುವ ಮನಸಿಲ್ಲದೇ, ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಗೆ ಹೋಗಿ ತಿಂದು ಬಂದರಾಯಿತು ಎಂದು ತಲೆಯನ್ನು ದಿಂಬಿಗೆ ಆನಿಸಿದೆ. ಅಷ್ಟೇ ನೆನಪು. ಆಗಲೇ ಬಹಳ ಸೋತಿದ್ದ ನನ್ನ ಮನಸ್ಸು, ದೇಹ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಗಾಡ ನಿದ್ರೆಗೆ ಜಾರಿದ್ದೆ.  ಇಂತಹ ಸ್ಥಿತಿಯಲ್ಲಿ ಇನ್ನಷ್ಟು ದಿಗಿಲು ಹುಟ್ಟಿಸಲೆಂಬಂತೆ ಒಂದು ಭಯಾನಕ ಕೆಟ್ಟ ಕನಸು ಬಿತ್ತು. ಮುಖವೆಲ್ಲಾ ಬೆವರು ಬಂತು, ತಕ್ಷಣ ಬಯದಿಂದ ಎಚ್ಚರಿಕೆಯಾಯಿತು. ಎಷ್ಟು ಹೊತ್ತು ಮಲಗಿದ್ದೇನೋ ಎಂಬ ಅಸ್ಪಷ್ಟ ಯೋಚನೆಯಲ್ಲಿ ಗಡಿಯಾರ ನೋಡಿದೆ. ರಾತ್ರಿ ಹನ್ನೆರಡೂ ವರೆ ಸಮಯ. ನಿದ್ದೆಯಿಂದ ಎಚ್ಚರಗೊಂಡು ಗಡಿಯಾರದ ಕಡೆ ದೃಷ್ಟಿ ಹಾಯಿಸುವುದೇ ತಡ, ನನ್ನ ಹಿಂದಿದ್ದ ಗೋಡೆಯಿಂದ ಎರಡು ಕೈಗಳು ಬಂದು ನನ್ನ ಕುತ್ತಿಗೆಯನ್ನು ಹಿಡಿದವು. ನನ್ನ ತಲೆಯ ಎಡಕ್ಕೆ ಹಾಗೂ ಬಲಕ್ಕೆ ಒಂದೊಂದು ಕೈ. ಕೇವಲ ಕೈಗಳು, ಗೋಡೆಯಿಂದಲೇ ಹುಟ್ಟಿ ಬಂದಂತವು. ಕತ್ತು ಹಿಸುಕಲು ಯತ್ನಿಸಿದವು. ಉಸಿರು ಕಟ್ಟಿದಂತಾಗಿ ಭಯಬೀತನಾಗಿ, ಕೈಗಳಿಂದ ಬಿಡಿಸಿಕೊಳ್ಳಲು ಒದರಿದೆ. ಬಲಿಷ್ಠ ಕೈಗಳು. ಹಿಡಿತ ಸಡಿಲವಾದೊಡನೆ ಎದ್ದು ಕೂತು ಹಿಂದೆ ತಿರುಗಿದೆ. ಗೋಡೆಯಿಂದ ಬಂ...