ಪೋಸ್ಟ್‌ಗಳು

ಎರಡು ಕೈಗಳ ಕಥೆ

ನನ್ನ ಇಂದಿನ ದಿನವೇ ಚೆನ್ನಾಗಿಲ್ಲ. ಆಫೀಸ್ ನಲ್ಲಿ ಬಾಸ್, ಕೆಲಸ ತಡವಾದದಕ್ಕೆ ಯಗ್ಗಾಮುಗ್ಗಾ ಬೈದಿದ್ದರು. ಇಂದು ಆಫೀಸಿನಿಂದ ಹೊರಡುವುದು ತಡವಾಗಿ ಮನೆಗೆ ಬಂದವನೇ ಹಾಸಿಗೆಯ ಮೇಲೆ ಕುಸಿದು ಬಿದ್ದೆ. ದೇಹಕ್ಕೂ ಅರಾಮೆನಿಸಲಿಲ್ಲ, ಮನಸ್ಸಿಗೂ ಅರಾಮೆನಿಸಲಿಲ್ಲ. ಕಿಚನ್ನಿಗೆ ಹೋಗುವ ಮನಸಿಲ್ಲದೇ, ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಗೆ ಹೋಗಿ ತಿಂದು ಬಂದರಾಯಿತು ಎಂದು ತಲೆಯನ್ನು ದಿಂಬಿಗೆ ಆನಿಸಿದೆ. ಅಷ್ಟೇ ನೆನಪು. ಆಗಲೇ ಬಹಳ ಸೋತಿದ್ದ ನನ್ನ ಮನಸ್ಸು, ದೇಹ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಗಾಡ ನಿದ್ರೆಗೆ ಜಾರಿದ್ದೆ.  ಇಂತಹ ಸ್ಥಿತಿಯಲ್ಲಿ ಇನ್ನಷ್ಟು ದಿಗಿಲು ಹುಟ್ಟಿಸಲೆಂಬಂತೆ ಒಂದು ಭಯಾನಕ ಕೆಟ್ಟ ಕನಸು ಬಿತ್ತು. ಮುಖವೆಲ್ಲಾ ಬೆವರು ಬಂತು, ತಕ್ಷಣ ಬಯದಿಂದ ಎಚ್ಚರಿಕೆಯಾಯಿತು. ಎಷ್ಟು ಹೊತ್ತು ಮಲಗಿದ್ದೇನೋ ಎಂಬ ಅಸ್ಪಷ್ಟ ಯೋಚನೆಯಲ್ಲಿ ಗಡಿಯಾರ ನೋಡಿದೆ. ರಾತ್ರಿ ಹನ್ನೆರಡೂ ವರೆ ಸಮಯ. ನಿದ್ದೆಯಿಂದ ಎಚ್ಚರಗೊಂಡು ಗಡಿಯಾರದ ಕಡೆ ದೃಷ್ಟಿ ಹಾಯಿಸುವುದೇ ತಡ, ನನ್ನ ಹಿಂದಿದ್ದ ಗೋಡೆಯಿಂದ ಎರಡು ಕೈಗಳು ಬಂದು ನನ್ನ ಕುತ್ತಿಗೆಯನ್ನು ಹಿಡಿದವು. ನನ್ನ ತಲೆಯ ಎಡಕ್ಕೆ ಹಾಗೂ ಬಲಕ್ಕೆ ಒಂದೊಂದು ಕೈ. ಕೇವಲ ಕೈಗಳು, ಗೋಡೆಯಿಂದಲೇ ಹುಟ್ಟಿ ಬಂದಂತವು. ಕತ್ತು ಹಿಸುಕಲು ಯತ್ನಿಸಿದವು. ಉಸಿರು ಕಟ್ಟಿದಂತಾಗಿ ಭಯಬೀತನಾಗಿ, ಕೈಗಳಿಂದ ಬಿಡಿಸಿಕೊಳ್ಳಲು ಒದರಿದೆ. ಬಲಿಷ್ಠ ಕೈಗಳು. ಹಿಡಿತ ಸಡಿಲವಾದೊಡನೆ ಎದ್ದು ಕೂತು ಹಿಂದೆ ತಿರುಗಿದೆ. ಗೋಡೆಯಿಂದ ಬಂ...

ಮಾಯಾ ಸುಂದರಿ

ಮದ್ಯ ರಾತ್ರಿ ಎರಡು ಘಂಟೆಯ ಸಮಯ. ಕೋಳೂರು ಎಂಬ ಹಳ್ಳಿಯ ಮದ್ಯದ ಜಗಲಿಕಟ್ಟೆಯ ಮೇಲೆ ಕುಳಿತವರು ನಾವು ನಾಲ್ಕು ಜನ. ನಾನು, ನನ್ನ ಗೆಳೆಯ ಕುಮಾರ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಅವನ ಬಾಳ ಸಂಗಾತಿಯಾಗಲಿದ್ದ ಪ್ರೇಮ ಮತ್ತು ಇನ್ನೊಬ್ಬಳು ಸ್ನೇಹಿತೆ. ಇನ್ನಿಬ್ಬರು ಹುಡುಗರು ಏನಾದರೂ ಸಹಾಯ ಸಿಗಬಹುದೆಂದು ದಾರಿಯುದ್ದಾ ನಡೆದು ಹೊರಟಿದ್ದರು. ವಾರಾಂತ್ಯದ ರಜಾ ದಿನಗಳಲ್ಲಿ ಮಂಗಳೂರಿಗೆ ಪ್ರವಾಸ ಹೊರಟು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದಾರಿಗೆ ಹತ್ತಿರದಲ್ಲೇ ಇದ್ದ ಒಂದು ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಇನ್ನೊಬ್ಬ ಗೆಳೆಯನ ಮನೆಯಲ್ಲಿ ತಂಗಿ ಬೆಳಿಗ್ಗೆ ಉಪಹಾರ ಮುಗಿಸಿ ಬೆಂಗಳೂರಿಗೆ ಹೊರಡುವುದೆಂದು ನಿರ್ಧರಿಸಿ ಹೈವೇ ಇಂದ ಕಾರನ್ನು ಹಳ್ಳಿ ದಾರಿಗೆ ತಿರುಗಿಸಿದ್ದೆವು. ಇನ್ನೇನು ಗೆಳೆಯನ ಊರು ಹತ್ತು ಮೈಲಿ ದೂರ ಎನ್ನುವಷ್ಟರಲ್ಲಿ ಕಾರು ಕೈ ಕೊಟ್ಟಿತು. ನಾವು ಈಗ ಕುಳಿತಿರುವುದು ಅದೇ ಜಾಗದಲ್ಲಿ. ಕೋಳೂರು ಪ್ರಾಥಮಿಕ ಪಾಠ ಶಾಲೆ ಎಂಬ ಅಸ್ಪಷ್ಟ ಬೋರ್ಡು ಹತ್ತಿರದ ಒಂದು ಸಣ್ಣ ಕಟ್ಟಡದ ಮೇಲೆ ಕಾಣಿಸುತ್ತಿತ್ತು. ಅದರ ಪಕ್ಕದಲ್ಲೇ ಹೋರಾಟ ಕಾಲು ದಾರಿಯೊಂದು ಕತ್ತಲಿನಲ್ಲಿ ಕಾಣೆಯಾಗಿತ್ತು. ಸಂಪೂರ್ಣ ನಿಶ್ಯಬ್ದ. ಇಡೀ ಕೋಳೂರು ಶಾಂತವಾಗಿ ಮಲಗಿತ್ತು. ಚಂದ್ರನ ಮಂದ ಬೆಳಕಿನಲ್ಲಿ ಕಂಡ ಸಣ್ಣ ಹಳ್ಳಗಳನ್ನೊತ್ತ ದಾರಿ ಖಾಲಿ-ಖಾಲಿ. ಅಪರೂಪಕ್ಕೂ ಒಂದೂ ವಾಹನ ಕಾಣ ಸಿಗಲಿಲ್ಲ. ನಮ್ಮನ್ನು ಬಿಟ್ಟರೆ ಒಬ್ಬ ಮನುಷ್ಯನೂ ಕಾಣ ಸಿಗಲಿಲ್ಲ. ಮನೆಗಳು ಸಹ ಗಾಢನಿದ್...

ಪ್ರೇಮ ಪುರಾಣ

ಕಡಲ ತೀರದಲ್ಲಿ ಅಲೆಗಳು ಅಬ್ಬರಿಸುತ್ತಾ, ಮುಸ್ಸಂಜೆಯ ಸೂರ್ಯನ ಕಿರಣಗಳ ಅವಲಂಬಿಸಿ ಹೊಳೆಯುತ್ತಾ ತಾನು ಕೂತಿದ್ದ ಬಂಡೆಗೆ ಅಪ್ಪಳಿಸಿ ಅಪ್ಪಳಿಸಿ ಹಿಂತಿರುಗುತ್ತಿದ್ದವು. ತಂಪಾದ ಗಾಳಿ ಅವನ ಮುಖವನ್ನು ಸ್ಪರ್ಶಿಸಿತು. ಬಂಡೆಯ ಮೇಲೆ ಒಬ್ಬನೇ ಕೂತು, ಅಗಾಧ ಸಮುದ್ರವನ್ನು ನೋಡುತ್ತಾ ತನ್ನದೇ ಆಲೋಚನೆಯಲ್ಲಿ ಮುಳುಗಿದ್ದ. ಇದುವರೆಗೂ ಅವನು ನೋಡಿದ ಯಾವ ಹುಡುಗಿಯರೂ ಅವನ ಮನಸ್ಸಿಗೆ ಒಪ್ಪಿರಲಿಲ್ಲ. ಸಂಗಾತಿ ಬೇಕು ಎಂದು ದೇಹ ಮತ್ತು ಮನಸ್ಸು ಹಾತೊರೆಯುತ್ತಿದ್ದರೂ ಸಂಪೂರ್ಣವಾಗಿ ಇಷ್ಟವಾಗುವ ಹುಡುಗಿ ಸಿಕ್ಕಿರಲಿಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನ್ಯತೆ. ಅವನ ಕನಸಿನಲ್ಲಿದ್ದ ಆ ಹುಡುಗಿಯನ್ನು ಹುಡುಕಿ ಹುಡುಕಿ ಸೋತು ಆಲೋಚಿಸುತ್ತಾ ಕೂತಿದ್ದ.  ಅದೇ ಬಂಡೆಗೆ ತಾಕಿದಂತಿರುವ ಪಕ್ಕದ ಇನ್ನೊಂದು ಬಂಡೆಯ ಮೇಲೆ ಒಂದು ಸುಂದರ ಹುಡುಗಿಯೂ ಕೂತಿದ್ದಳು. ಅವಳ ನೋಟವೂ ಅದೇ ಸಮುದ್ರದ ಅಲೆಗಳತ್ತ. ಅವಳೂ ಕೂಡ ಒಬ್ಬಂಟಿ. ತನ್ನ ಪರಿಪೂರ್ಣ ಸಂಗಾತಿಗಾಗಿ ಎದುರು ನೋಡುತ್ತಾ ಜೀವನದ ಏಕಾಂತದಲ್ಲಿ ಸೋತ ಹೆಣ್ಣು ಜೀವ. ಇಬ್ಬರೂ ಕೂತು ಸಮುದ್ರವನ್ನೇ ದಿಟ್ಟಿಸುತ್ತಿದ್ದಾರೆ, ಇಬ್ಬರೂ ಒಂದೇ ಭಾವನೆಯಲ್ಲಿ ಮುಳುಗಿ. ಅವಳಿಗಾಗಿ ಅವನು ಮತ್ತು ಅವಳಿಗಾಗಿ ಅವನು ಪರಸ್ಪರ ಕಾಯುತ್ತಿದ್ದರು. ಇಬ್ಬರ ಪರಸ್ಪರ ಸಾನಿದ್ಯದಲ್ಲಿರುವುದು ಇಬ್ಬರ ಗಮನಕ್ಕೂ ಬಂದಿರಲಿಲ್ಲ. ಇಬ್ಬರ ಒಬ್ಬರಿಗೊಬ್ಬರು ಬೆನ್ನು ಮಾಡಿ ಕೂತಿದ್ದರು. ಇಬ್ಬರಿಗೂ ಇದ್ದ ಒಂದೇ ಸಂಗಾತಿ ಎಂದೂ ಬಿಟ್ಟು ದೂರ ಹೋಗದ ಸ...

ಒಂದು ಓತಿಯ ಕಥೆ

  ಓತಿಕ್ಯಾತ ರಸ್ತೆಯ ನಡುವೆ ವಿಲವಿಲ ಒದ್ದಾಡುತ್ತಲೇ ಇತ್ತು. ಅದರ ನರಳಾಟ ನನಗೇ ಬಾರೀ ಸಂಕಟ ತಂದಿಟ್ಟಿತ್ತು. ಆಗೊಮ್ಮೆ ಈಗೊಮ್ಮೆ ಕಾರು ಬೈಕುಗಳು ಬರ್ರ್ ಎಂದು ಆಕಡೆಯಿಂದ ಈಕಡೆ ,   ಈಕಡೆಯಿಂದ ಆಕಡೆ ಹಾರುತ್ತಿದ್ದವು. ಬಲಕ್ಕೆ ತಿರುಗಿ ಒಂದು ವಾಹನ ಕಣ್ಮರೆಯಾಗುವ ಮೊದಲೇ ಎಡದಿಂದ ಇನ್ನೊಂದು ವಾಹನದ ಸದ್ದು ಶುರುವಾಗುತ್ತಿತ್ತು. ಹಾಗೆಯೇ ಎರಡು ನಿಮಿಷ ನೋಡುತ್ತಾ ನಿಂತಿದ್ದೆ. ನಾನು ತಾನೇ ಏನು ಮಾಡಬಹುದು ?   ನಾನು ಹೋಗಿ ಅದನ್ನು ರಕ್ಷಿಸಿಕೊಳ್ಳಬಹುದೇ ?   ಅದರ ಜೀವ ಇನ್ನು ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಲಿದೆ ಎಂಬುದು ಗೊತ್ತಿರುವಾಗ ನಾನು ಹೋಗಿ ಅದನ್ನು ರಸ್ತೆಯ ಬದಿಗೆ ಸರಿಸುವುದರಿಂದ ಅದಕ್ಕೆ ಯಾವ ರೀತಿಯ ಸಹಾಯ ಆಗಬಹುದು ಎಂಬುದು ನನಗೆ ಕಲ್ಪನೆಗೆ ಬರಲಿಲ್ಲ. ಸದ್ಯದ ಪರಿಸ್ತಿತಿಯಲ್ಲಿ ಅದು ನನ್ನ ಕಣ್ಣೋಟದಿಂದ ತಪ್ಪಿಸಿಕೊಂಡು ಓಡಿ ಹೋಗದಂತೆ ನೋಡುತ್ತಾ ಅದು ತಾನಾಗೆ ಕಾರುಗಳ ಚಕ್ರಗಳಿಂದ ತಪ್ಪಿಸಿಕೊಂಡು ರಸ್ತೆ ಬದಿ ತಲುಪುವುದೋ ಅಥವಾ ಯಾವುದಾದರೂ ಕಾರಿನ ಚಕ್ರಕ್ಕೆ ಸಿಕ್ಕಿ ಅಪ್ಪಚ್ಚಿಯಾಗಿ ಸಾಯುವುದೋ ಎಂದು ನೋಡುತ್ತಿರುವುದೊಂದೇ ನಾನು ಮಾಡುತ್ತಿದ್ದ ಕೆಲಸ. ಅದು ರಸ್ತೆಯ ಆ ಕಡೆಯ ಗಿಡಗಳ ಮಧ್ಯದಿಂದ ಓಡುತ್ತಾ ರಸ್ತೆಯ ಮದ್ಯಕ್ಕೆ ಬರುವವರೆಗೂ ನಾನು ನೋಡಿದ್ದೆ. ಅದು ನೇರವಾಗಿ ಒಂದೇ ವೇಗದಲ್ಲಿ ಬಂದಿದ್ದರೆ ಯಾವುದೇ ಹಾನಿಯಿಲ್ಲದೆ ಈಕಡೆ ಬದಿ ತಲುಪುತ್ತಿತ್ತು. ಆದರೆ ಅದರ ಹುಟ್ಟು ಗುಣವೆಂಬಂತೆ ರಸ್ತೆಯ ಮದ್ಯದಲ್ಲಿ ...

ಕಿಟಕಿ ಸೀಟು

ಚಿಕ್ಕ ವಯಸ್ಸಿನಿಂದ ಕಿಟಕಿ ಪಕ್ಕದ ಸೀಟಿನಲ್ಲಿ ಕೂರುವುದು ನನಗೆ ಇಷ್ಟದ ಸಂಗತಿ. ಕಿಟಕಿ ಪಕ್ಕದ ಸೀಟು, ಬಸ್ಸು ಹೊರಟಾಗಿನಿಂದ ಸ್ಥಳ ಮುಟ್ಟುವವರೆಗಿನ ರಸ್ತೆ ಪಕ್ಕದ ಪ್ರಪಂಚದ ವಿವರಗಳನ್ನು ಇಂಚಿಂಚೂ ತೋರಿಸುವ ದೂರದರ್ಶನದಂತೆ. ಊರಿನ ಸದಸ್ಯನಾಗಿ ಬದುಕಿದಾಗ ಕಣ್ಣಿಗೆ ಕಾಣದ ಎಷ್ಟೋ ವಿವರಗಳು ಬಸ್ಸಿನ ಪ್ರಯಾಣಿಕನಾಗಿ ಕಂಡದ್ದುಂಟು. ಊರಿನ ಸದಸ್ಯನಿಗೆ ಎಂಟೂ ದಿಕ್ಕನ್ನು ನೋಡುವ ಒತ್ತಡಕ್ಕೆ ಸಿಲುಕಿ ಯಾವುದನ್ನೂ ಸರಿಯಾಗಿ ಗಮನಿಸಲಾಗದೆ ಕಂಡದ್ದರಲ್ಲಿ ಎಷ್ಟಿದೆಯೋ ಅಷ್ಟರ ಮೇಲೆ ಜೀವಿಸುತ್ತಾನೆ. ಬಸ್ಸಿನ ಕಿಟಕಿ ಪಕ್ಕ ಕೂತ ಪ್ರಯಾಣಿಕನಿಗೆ ತನಗೆ ಕಾಣುವ ಒಂದೇ ದಿಕ್ಕು ಸಂಪೂರ್ಣ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಕಿಟಕಿ ಪಕ್ಕದ ಸೀಟು ಬೇಕೆನಿಸುವುದು. ಬಸ್ಸಲ್ಲಿ ಜನ ತುಂಬಿ ತುಳುಕುವಾಗ ಮೊದಲು ಖಾಲಿ ಸೀಟು ಸಿಕ್ಕರೆ ಸಾಕೆನಿಸುವ ನನಗೆ, ಬಸ್ಸು ಖಾಲಿಯಾದಾಗ ಕಿಟಕಿ ಸೀಟಿನ ಆಸೆ.  ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಬಸ್ಸು ಹತ್ತಿದ ನನಗೆ ಕೊನೆಗೂ ಅರ್ಧ ಗಂಟೆಯ ನಂತರ ಕಿಟಕಿ ಪಕ್ಕದ ಸೀಟು ಲಪಟಾಯಿಸಿಬಿಟ್ಟೆ. ಇಷ್ಟು ಹೊತ್ತೂ ಬಸ್ಸಿನಲ್ಲಿದ್ದ ಜನರ ಮೇಲೆ ಓಡಾಡುತ್ತಿದ್ದ ಕಣ್ಣುಗಳು, ಒಮ್ಮೆಲೆ ಅವರನ್ನೆಲ್ಲ ಮರೆತುಬಿಟ್ಟವು. ನನಗೂ ನನ್ನ ಸಹ ಪ್ರಯಾಣಿಕರಿಗೂ ಸಂಬಂಧವೇ ಇರದಂತೆ, ಕಿಟಕಿಯಾಚೆಗಿನ ಜನರೆಲ್ಲ ನನಗಾಗಿ, ನನ್ನ ಗಮನ ಸೆಳೆಯಲೆಂದೇ ಚಟುವಟಿಕೆಯಲ್ಲಿ ತೊಡಗಿರುವಂತೆ ಬಾಸವಾಗತೊಡಗಿತು. ನೂರಾರು ವಾಹನ, ಬೆಂಗಳೂರು...

ಗುಲಾಮರು

ಎಂದೂ ಕೈಗೆ ಬರದ ಸಂಬಳದ ಆಸೆಯಲ್ಲಿ, ಎಂದೂ ಕೊನೆಯಾಗದ ನೌಕರಿ ಹಿಡಿದ ನಾನು! ಬೆಳಿಗ್ಗೆ ಕಚೇರಿಗೆ ಹೋಗಿ, ರಾತ್ರಿ ಸವೆದು ಮನೆ ಸೇರುವ ದಿನಚರಿ—ಈ ಜಂಜಾಟದಿಂದ ಬಿಡುವು ಬೇಕೆನಿಸಿತು. ಬೆಂಗಳೂರಿಗೆ ಬೀಗ ಜಡಿದು, ದೂರ ದೂರ ಏಕಾಂತವನ್ನರಸಿ ಹೊರಟೆ…  ಸಮುದ್ರ ದಂಡೆಯ ಮೇಲೆ ಯಾರೂ ಇರದ ಜಾಗ ಆರಿಸಿ ಒಬ್ಬನೇ ಕೂತಿದ್ದೆ. ಎದುರಿಗೆ ಕೊನೆಯೇ ಇಲ್ಲದೆ ಹರಡಿಕೊಂಡಿದ್ದ ವಿಶಾಲ ಸಮುದ್ರ. ಸಮುದ್ರದ ಅಲೆಗಳು ಹತ್ತಿರಕ್ಕೆ ಬಂದು ವಾಪಸ್ಸು ಹೋಗುತ್ತಿದ್ದವು. ನನ್ನನ್ನು ಮುಟ್ಟಲು ಇಷ್ಟವಿಲ್ಲದೆ ಮುನಿಸಿ ನಡೆದ ಗೆಳತಿಯಂತೆ ಅಥವಾ ಪ್ರಕೃತಿ ತನ್ನ ಮಗುವನ್ನು ಆಟಾಡಿಸಲೆಂಬಂತೆ. ಹಾಗೆಯೇ ದಿಟ್ಟಿಸುತ್ತಾ ಕೂತೆ.  ಇಲ್ಲ, ಸಮುದ್ರ ಸಹ ಸ್ವತಂತ್ರವಾಗಿರಲಿಲ್ಲ. ತನ್ನದೇ ಹನಿಗಳ ಗುಲಾಮ. ಚಿಕ್ಕ ಹನಿಗಳು ಸೇರಿ ಅಲೆಗಳಾಗಿ, ಅಲೆಗಳು ಸೇರಿ ಅಗಾಧವಾಗಿ ಭಾಸವಾಗುವ ನೀರಿನ ರಾಶಿ. ತುಂಬಿದ ಸಮುದ್ರ ಪ್ರತಿ ಹನಿಯ ಗುಲಾಮನಾಗಿತ್ತು. ಹನಿಗಳ ಒಟ್ಟು ಆಜ್ಞೆಯನ್ನು ಹೊತ್ತು ಜೀವಿಸುತ್ತಿತ್ತು. ಸ್ವತಂತ್ರ ಮನುಷ್ಯ ಸೇರಿ ಬೃಹತ್ ಸಮಾಜ ರೂಪಿಸಿ, ತನಗೆ ಅರಿವಿಲ್ಲದೆಯೇ ಅದರ ಅಗಾದತೆಗೆ ಗುಲಾಮನಾಗಿ ಬದುಕಿದಂತೆ.

ಅಜ್ಞಾತ

ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ, ಎರಡು ತಿಂಗಳ ಕಾಲ ಬರೋಬ್ಬರಿ ಮಳೆ ಸುರಿಯುತ್ತಿದೆ. ಆಗಾಗ ಮದ್ಯದಲ್ಲಿ ಅಲ್ಪಸ್ವಲ್ಪ ಸುಮ್ಮನಾದರೂ, ಜನಜೀವನವನ್ನು ಸಂಪೂರ್ಣ ಸ್ತಬ್ಧಗೊಳಿಸಿದಂತಹ ಮಳೆ. ಆಗಿನ್ನೂ ಮಾನವನ ವಿಕಾಸದಲ್ಲಿ ಬಟ್ಟೆ ಹಾಕಿಕೊಳ್ಳುವ ಅಥವಾ ಭಾಷೆ ಕಲಿತು ಮಾತನಾಡುವ ಯಾವುದೇ ಸಂಪ್ರದಾಯ ಇಲ್ಲದೆ, ಆಹಾರವನ್ನರಸಿ ಗುಂಪು ಗುಂಪುಗಳಾಗಿ ಪ್ರಯಾಣ ಮಾಡಿಕೊಂಡು  ಬದುಕುತ್ತಿದ್ದ ಕಾಲ. ಇಂತಹ ಕಾಲದಲ್ಲಿ, ದಟ್ಟ ಕಾಡಿನ ನಡುವೆ ಇರುವ ಸಣ್ಣ ಬಯಲಿನಲ್ಲಿ, ದೊಡ್ಡ ಕಲ್ಲುಬಂಡೆಗಳ ಒಂದು ಸಮೂಹದ ಮಧ್ಯೆ ಅತಿ ಎತ್ತರದ ಕಲ್ಲುಬಂಡೆಯನ್ನು ಆರಿಸಿಕೊಂಡು, ಮಳೆಯನ್ನು ಅಂಜಿಸಲೋ ಎಂಬಂತೆ ಕುಳಿತು, ಆಕಾಶವನ್ನೇ ಬಿಟ್ಟೂ ಬಿಡದೆ ನೋಡುತ್ತಿದ್ದ. ಇವನ ಹೆಸರು ಯಾರಾದರೂ ಇಟ್ಟಿದ್ದರೋ ಇಲ್ಲವೋ, ನನಗೂ ತಿಳಿಯದ ಸಂಗತಿ. ಕಥೆಯಲ್ಲಿ ಬೇರೆ ಯಾವುದೇ ಮುಖ್ಯ ಪಾತ್ರಗಳು ಇಲ್ಲದ ಕಾರಣ ಇವನಿಗೆ ಹೆಸರು ಕೊಡುವ ಅನಿವಾರ್ಯತೆ ಇಲ್ಲ.  ಕೆಲವು ದಿನಗಳ ಹಿಂದೆ ಅವನು ಒಂದು ತಂಡದ ಜವಾಬ್ದಾರಿಯುತ ಸದಸ್ಯನಾಗಿದ್ದ. ನಲವತ್ತರಿಂದ ಐವತ್ತು ಜನರ ಆ ಗುಂಪಿನಲ್ಲಿ ಇವನೇ ಅತ್ಯಂತ ಬಲಶಾಲಿ. ಅದನ್ನು ಬೇಟೆಯಾಡಿ ಆಹಾರ ಗಿಟ್ಟಿಸುವಲ್ಲಿಯೂ ತೋರಿಸುತ್ತಿದ್ದ. ಅಷ್ಟೂ ಸದಸ್ಯರು ಒಟ್ಟಾಗಿ ಚಲಿಸುತ್ತಿದ್ದರು, ಮರದ ಕೆಳಗೆ ಒಟ್ಟಾಗಿ ಮಲಗುತ್ತಿದ್ದರು. ಒಂದೇ ಜೀವದ ವಿವಿಧ ದೇಹಗಳಂತೆ ಬದುಕಿದ್ದರು.  ಆಗಲೇ ಈ ದರಿದ್ರ ಮಳೆ ಶುರುವಾದದ್ದು.  ಬಹುಕಾಲ ಮಳೆಯಿಲ್ಲದೆ ಆತಂಕದಲ್ಲಿ...