ಮಾಯಾ ಸುಂದರಿ
ಮದ್ಯ ರಾತ್ರಿ ಎರಡು ಘಂಟೆಯ ಸಮಯ. ಕೋಳೂರು ಎಂಬ ಹಳ್ಳಿಯ ಮದ್ಯದ ಜಗಲಿಕಟ್ಟೆಯ ಮೇಲೆ ಕುಳಿತವರು ನಾವು ನಾಲ್ಕು ಜನ. ನಾನು, ನನ್ನ ಗೆಳೆಯ ಕುಮಾರ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಅವನ ಬಾಳ ಸಂಗಾತಿಯಾಗಲಿದ್ದ ಪ್ರೇಮ ಮತ್ತು ಇನ್ನೊಬ್ಬಳು ಸ್ನೇಹಿತೆ. ಇನ್ನಿಬ್ಬರು ಹುಡುಗರು ಏನಾದರೂ ಸಹಾಯ ಸಿಗಬಹುದೆಂದು ದಾರಿಯುದ್ದಾ ನಡೆದು ಹೊರಟಿದ್ದರು.
ವಾರಾಂತ್ಯದ ರಜಾ ದಿನಗಳಲ್ಲಿ ಮಂಗಳೂರಿಗೆ ಪ್ರವಾಸ ಹೊರಟು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದಾರಿಗೆ ಹತ್ತಿರದಲ್ಲೇ ಇದ್ದ ಒಂದು ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಇನ್ನೊಬ್ಬ ಗೆಳೆಯನ ಮನೆಯಲ್ಲಿ ತಂಗಿ ಬೆಳಿಗ್ಗೆ ಉಪಹಾರ ಮುಗಿಸಿ ಬೆಂಗಳೂರಿಗೆ ಹೊರಡುವುದೆಂದು ನಿರ್ಧರಿಸಿ ಹೈವೇ ಇಂದ ಕಾರನ್ನು ಹಳ್ಳಿ ದಾರಿಗೆ ತಿರುಗಿಸಿದ್ದೆವು. ಇನ್ನೇನು ಗೆಳೆಯನ ಊರು ಹತ್ತು ಮೈಲಿ ದೂರ ಎನ್ನುವಷ್ಟರಲ್ಲಿ ಕಾರು ಕೈ ಕೊಟ್ಟಿತು. ನಾವು ಈಗ ಕುಳಿತಿರುವುದು ಅದೇ ಜಾಗದಲ್ಲಿ. ಕೋಳೂರು ಪ್ರಾಥಮಿಕ ಪಾಠ ಶಾಲೆ ಎಂಬ ಅಸ್ಪಷ್ಟ ಬೋರ್ಡು ಹತ್ತಿರದ ಒಂದು ಸಣ್ಣ ಕಟ್ಟಡದ ಮೇಲೆ ಕಾಣಿಸುತ್ತಿತ್ತು. ಅದರ ಪಕ್ಕದಲ್ಲೇ ಹೋರಾಟ ಕಾಲು ದಾರಿಯೊಂದು ಕತ್ತಲಿನಲ್ಲಿ ಕಾಣೆಯಾಗಿತ್ತು.
ಸಂಪೂರ್ಣ ನಿಶ್ಯಬ್ದ. ಇಡೀ ಕೋಳೂರು ಶಾಂತವಾಗಿ ಮಲಗಿತ್ತು. ಚಂದ್ರನ ಮಂದ ಬೆಳಕಿನಲ್ಲಿ ಕಂಡ ಸಣ್ಣ ಹಳ್ಳಗಳನ್ನೊತ್ತ ದಾರಿ ಖಾಲಿ-ಖಾಲಿ. ಅಪರೂಪಕ್ಕೂ ಒಂದೂ ವಾಹನ ಕಾಣ ಸಿಗಲಿಲ್ಲ. ನಮ್ಮನ್ನು ಬಿಟ್ಟರೆ ಒಬ್ಬ ಮನುಷ್ಯನೂ ಕಾಣ ಸಿಗಲಿಲ್ಲ. ಮನೆಗಳು ಸಹ ಗಾಢನಿದ್ರೆಯಲ್ಲಿ ಮುಳುಗಿದ್ದವು. ನಾವೂ ಅದಕ್ಕೆ ಹೊಂದುವಂತೆ ಕಡಿಮೆ ಸದ್ದಿನ ಮಾತುಕತೆ ನಡೆಸುತ್ತಿದ್ದೆವು.
ನನ್ನ ಪಕ್ಕದಲ್ಲೇ ಕುಳಿತು ಪಿಸು ಪಿಸು ಮಾತನಾಡುತ್ತಿದ್ದ ಕುಮಾರ ಮತ್ತು ಪ್ರೇಮ ಜೊತೆ ನಾನೂ ಸೇರಿಕೊಂಡೆ. ಏನೂ ಮಾಡಲಾಗದ ನಮ್ಮ ಪರಿಸ್ಥಿತಿ ನೆನೆದು ಉಪಾಯಗಳನ್ನು ಹುಡುಕುತ್ತಾ ಹಾಸ್ಯ ಚಟಾಕಿ ಹಾರಿಸುತ್ತಾ ಕುಳಿತೆವು. ಪ್ರವಾಸದುದ್ದಕ್ಕೂ ನನ್ನ ಕತ್ತಿನಲ್ಲಿದ್ದ ಕ್ಯಾಮೆರಾ ಎಲ್ಲರ ಫೋಟೋಗಳನ್ನು ವಿಶೇಷವಾಗಿ ಈ ಜೋಡಿಯ ಫೋಟೋ ಸೆರೆ ಹಿಡಿದಿತ್ತು. ಪ್ರೇಮಾಳ ಮೋಹಕ ಕಿರುನಗೆ ನನ್ನಷ್ಟು ಚೆನ್ನಾಗಿ ಯಾರು ತಾನೇ ಸೆರೆ ಹಿಡಿಯಬಲ್ಲರು?. ಪ್ರವಾಸ ಮುಗಿಸಿ ಕ್ಯಾಮೆರಾ ಸಹ ನನ್ನ ಕುತ್ತಿಗೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿತ್ತು ಎನ್ನಬಹುದು. ಇಷ್ಟರಲ್ಲಿ ಸಹಾಯ ಹುಡುಕಿ ಹೋರಾಟ ಗೆಳೆಯರು ಇಬ್ಬರೂ ನಿರಾಶರಾಗಿ ಹಿಂದಿರುಗಿ ಬರುತ್ತಿರುವುದು ದೂರದಿಂದ ಅಸ್ಪಷ್ಟವಾಗಿ ಕಂಡಿತು.
ಕುಮಾರ ನೀರಿಗಾಗಿ ಹತ್ತಿರದಲ್ಲೇ ನಿಂತಿದ್ದ ಕಾರಿನ ಬಳಿ ತೆರಳಿದ. ನನ್ನ ನೋಟ ಪ್ರೇಮಾಳ ಕಡೆ ಹೊರಳಿತು. ಇವಳಿಂದಲೇ ಅಲ್ಪ ಸ್ವಲ್ಪ ಚಂದ್ರನ ಬೆಳಕು ಚೆಲ್ಲುವಂತೆ ಬಾಸವಾಯಿತು. ಅವಳು, ಸಣ್ಣ ನನ್ನ ಕಡೆ ಒಂದು ಸಣ್ಣ ಕಿರು ನಗೆ ಬೀರಿ, ನಿದಾನಕ್ಕೆ ಎದ್ದು ತಕ್ಷಣ ಜಗುಲಿಯ ಮೆಟ್ಟಲಿಳಿದು ಶಾಲಾ ಕಟ್ಟಡದ ಪಕ್ಕಕ್ಕಿದ್ದ ಕಾಲು ದಾರಿಯ ಕಡೆ ವೇಗವಾಗಿ ಓಡತೊಡಗಿದಳು. ಓಡಲು ಶುರು ಮಾಡಿದಾಗ ಅವಳ ಮುಖ ನನಗೆ ಕಾಣುವಂತಿರಲಿಲ್ಲ. ಬೆನ್ನು ಮುಚ್ಚಿದ ಕೇಶ ರಾಶಿ. ಸಣ್ಣಕ್ಕೆ ಉದ್ದವಿದ್ದ ಅವಳ ಮೈಕಟ್ಟಿಗೆ ಬಳ್ಳಿಯಂತೆ ಸುತ್ತಿದ ಸೀರೆ. ಓಡಲು ಶುರು ಮಾಡಿದ್ದೇ, ನಾನು ಜಗಲಿಯ ಮೆಟ್ಟಿಲು ಇಳಿದು ಅವಳ ಹಿಂದೆ ಓಡಿದೆ. ಸ್ವಲ್ಪ ದೂರ ಓಡಿದ ನಂತರ ಏನೂ ಅರ್ಥವಾಗದ ಭಾವನೆ ವ್ಯಕ್ತಪಡಿಸುತ್ತ ಇನ್ನಿತರರು ನನ್ನ ಹಿಂದೆಯೇ ಓಡಿ ಬಂದರು. ಕುಮಾರನ ಮುಖ ಭಯದಿಂದ ತುಂಬಿತ್ತು. ಅವಳಿನ್ನೇನು ಕತ್ತಲು ಸಮೀಪಿಸಬೇಕು ಎನ್ನುವಷ್ಟರಲ್ಲಿ ನಿಂತು ತಕ್ಷಣ ಕ್ಯಾಮೆರಾ ಗೆ ಕೈ ಹಾಕಿ ಅವಳ ಒಂದು ಫೋಟೋ ಕ್ಲಿಕ್ಕಿಸಿದೆ. ಇತರರಿಗೆ ಆಶ್ಚರ್ಯವಾದರೂ ಅದನ್ನು ವ್ಯಕ್ತ ಪಡಿಸಲು ಇದ್ದ ಸಮಯಾಭಾವದ ಕಾರಣ ಕತ್ತಲಲ್ಲಿ ಓಡಿ ಮರೆಯಾದ ಪ್ರೇಮಾಳ ಹಿಂದೆ ಇವರು ಓಡಿ ಮರೆಯಾದರು. ನಾನು ಅವರನ್ನು ಹಿಂಬಾಲಿಸಿದೆ.
ಎರಡು ಕಾಲು ದಾರಿಗಳು ಕೂಡುವ ಜಾಗ ತಲುಪಿದ್ದೆವು. ಅಲ್ಲಿಗೆ ಮರಗಳಿಂದ ಸೃಷ್ಟಿಯಾಗಿದ್ದ ಕತ್ತಲು ಕೊನೆಯಾಗಿ ಸ್ವಲ್ಪ ಮಂದ ಬೆಳಕು ಮೂಡಿತು. ನಾಯಿಗಳು ಬೊಗಳಿದವು. ಪ್ರೇಮ ಒಬ್ಬಳನ್ನು ಹೊರತುಪಡಿಸಿ ಇನ್ನೆಲ್ಲರೂ ಅಲ್ಲಿದ್ದೆವು. ಎಲ್ಲರ ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆ ಬಿಟ್ಟು ಬೇರೇನೂ ಇರಲಿಲ್ಲ.

ಹಲವು ಗಂಟೆ ಅಲ್ಲೆಲ್ಲಾ ಹುಡುಕಿ ಎಲ್ಲಿಯೂ ಸಿಗದೇ ಭಯದಿಂದ ಮತ್ತೆ ಎಲ್ಲರೂ ಕಾರಿನ ಹತ್ತಿರ ಬಂದೆವು. ಇನ್ನು ಎರಡು ತಾಸಿನಲ್ಲಿ ಬೆಳಗಾಗುವುದಿತ್ತು. ಹಾಗೆ ಕಾದು ಕೂತು ಬೆಳಿಗ್ಗೆ ಹಳ್ಳಿಗರ ಸಹಾಯ ಯಾಚಿಸುವುದು ಮೇಲೆನಿಸಿತು.
ಅವಳು ಓಡಿ ಹೋದಾಗಲೂ ಫೋಟೋ ಕ್ಲಿಕ್ಕಿಸಿದ ನಾನೂ ಸಹ ತಪ್ಪಿಸಿಕೊಂಡು ಓಡಿ ಹೋದವಳಿಗಿಂತ ನಿಗೂಢವಾಗಿದ್ದೆ ನನ್ನ ಸ್ನೇಹಿತರಿಗೆ. ಸ್ವಲ್ಪ ದೂರ ಕೂತು ಅದೇ ಫೋಟೋ ದಿಟ್ಟಿಸುತ್ತಾ ಕೂತೆ. ಕತ್ತಲ ಹಿನ್ನೆಲೆಯ ಅವಳು ಹಿಂದಿನಿಂದಲೂ ಸುಂದರಿಯೇ.
ಅದೇ ರೀತಿ ಕತ್ತಲಿನಲ್ಲಿ ಓಡಿ ಮರೆಯಾದ ಇನ್ನೂ ಎಂಟು ಯುವತಿಯರ ಹಿಂದಿನಿಂದ ಕ್ಲಿಕ್ಕಿಸಿದ ಫೋಟೋಗಳೊಡನೆ ಹೋಲಿಸಿ ನೋಡಿದೆ. ಇದು ಎಲ್ಲದರಲ್ಲೂ ಉತ್ತಮ ಎನಿಸುವಂತದ್ದು. ಮುಖದಲ್ಲಿ ಸಣ್ಣ ನಗೆ ಮೂಡಿತು. ಎದೆಯಲ್ಲೊಂದು ನೆಮ್ಮದಿಯ ಗಾಳಿ ಹರಿಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ